ಬೋಧನೆ
ತರಬೇತಿ ಶಿಬಿರಗಳು
ಶಾಸ್ತ್ರೀಯ ಪಠ್ಯಗಳನ್ನು ಅಧ್ಯಯನ ಮಾಡುವವರ ಸಂಖ್ಯೆ ಇಂದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರಾಚೀನ
ಭಾಷೆ ಕಠಿಣ ಎಂಬ ಅಪನಂಬಿಕೆ ತೊಲಗಿಸಿ, ಪ್ರಾಚೀನ ಸಾಹಿತ್ಯದ ಅಮೂಲ್ಯ ವಿಚಾರಗಳನ್ನು ಜನಸಾಮಾನ್ಯರಿಗೆ
ತಲುಪಿಸಲು ಪ್ರಾಚೀನ ಮತ್ತು ಆಧುನಿಕ ಭಾಷೆಗಳ ನಡುವೆ ಅನುಸಂಧಾನಗೊಳಿಸುವ ಅಗತ್ಯವಿದೆ. ಹಳಗನ್ನಡ ಹಾಗೂ
ನಡುಗನ್ನಡವು ಆಧುನಿಕ ಕನ್ನಡ ಸಾಹಿತ್ಯದ ಬೇರುಗಳಾಗಿದ್ದು, ಈ ನಿಟ್ಟಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ
ಅಧ್ಯಯನ ಕೇಂದ್ರವು ಕನ್ನಡ ಭಾಷೆಯನ್ನು ಬೋಧಿಸುವ ಶಿಕ್ಷಕರು, ಉಪನ್ಯಾಸಕರು, ಸಂಶೋಧಕರು, ಪದವಿ ಮತ್ತು
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಳಗನ್ನಡವನ್ನು ಓದುವ, ಅರ್ಥೈಸಿಕೊಳ್ಳುವ ಬಗೆಗಳನ್ನು ತಿಳಿಸಿಕೊಡುವ
ಉದ್ದೇಶದಿಂದ ಕರ್ನಾಟಕ ರಾಜ್ಯಾದ್ಯಂತ ಅಭಿಜಾತ ಕನ್ನಡ ಪಠ್ಯವಾಚನ ಮತ್ತು ಅಧ್ಯಯನ ಶಿಬಿರಗಳನ್ನು ನಡೆಸಿಕೊಂಡು
ಬರುತ್ತಿದೆ. ಹಲವು ಶಿಬಿರಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗವನ್ನು ನೀಡಿ ಸಹಕರಿಸಿದೆ. ವಿವಿಧ
ವಿಶ್ವವಿದ್ಯಾಲಯಗಳು, ಸಂಘಸಂಸ್ಥೆಗಳು ಕೇಂದ್ರದ ಜತೆಗೂಡಿವೆ. ಈ ಶಿಬಿರಗಳಲ್ಲಿ ಕನ್ನಡದ ಬಹುತೇಕ ಎಲ್ಲಾ
ಹಿರಿಯ ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಲಭ್ಯವಿದ್ದ ಕಡೆಗಳಲ್ಲಿ ಸಂಗೀತ
ಕಲಾವಿದರನ್ನು ಆಹ್ವಾನಿಸಿ ಶಾಸ್ತ್ರೀಯ ಸಂಗೀತ, ಗಮಕವಾಚನಗಳ ಮೂಲಕ ಶಾಸ್ತೀಯ ಕನ್ನಡದ ಸೊಗಡನ್ನು ಬಿಂಬಿಸುವ
ಪ್ರಯತ್ನ ಮಾಡಲಾಯಿತು. ಕರ್ನಾಟಕ ರಾಜ್ಯದ ವಿವಿಧ ಭಾಗಗಳ ಸುಮಾರು ಒಂದು ಸಾವಿರ ಕನ್ನಡ ಅಧ್ಯಾಪಕರು
ಮತ್ತು ಯುವ ಸಂಶೋಧಕರು ಈ ಶಿಬಿರಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆದಿದ್ದು ಇವರ ಮೂಲಕ ಕರ್ನಾಟಕದ ಲಕ್ಷಾಂತರ
ವಿದ್ಯಾರ್ಥಿಗಳು ಶಾಸ್ತ್ರೀಯ ಕನ್ನಡದ ಪಠ್ಯಗಳನ್ನು ಓದಲು ಮತ್ತು ಅರ್ಥೈಸಲು ಸಾಧ್ಯವಾಗಿದೆ ಎಂದು ಕೇಂದ್ರವು
ಮನಗಂಡಿದೆ. ಬೆಳಗಾವಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಕೋಲಾರ, ಚಿತ್ರದುರ್ಗ, ಕೊಡಗು, ಮಂಡ್ಯ
ಮತ್ತು ಮೈಸೂರುಗಳಲ್ಲಿ ಈ ಶಿಬಿರಗಳು ನಡೆದಿದ್ದು ಅವುಗಳ ಸಂಕ್ಷಿಪ್ತ ವರದಿಗಳನ್ನು ಇಲ್ಲಿ ನೀಡಲಾಗಿದೆ.
ಕರ‍್ತನ ಸಾಹಿತ್ಯ : ಮರ‍್ಗ ಮತ್ತು ದೇಸಿ
ಸ್ಥಳ : ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾ.ಭಾ.ಸಂ., ಮೈಸೂರು
ದಿನಾಂಕ : ಫೆಬ್ರವರಿ ೨೪ ರಿಂದ ೨೮, ೨೦೨೦
ಸಂಚಾಲಕರು : ಡಾ. ಮಾಲಿನಿ ಎನ್. ಅಭ್ಯಂಕರ್, ಅಸೋಸಿಯೇಟ್ ಫೆಲೋ
|
|
ಪದವಿಪೂರ್ವ ಉಪನ್ಯಾಸಕರಿಗಾಗಿ
ಸ್ಥಳ : ಭಾರತೀಯ ಭಾಷಾ ಸಂಸ್ಥಾನ, ಮೈಸೂರು
ದಿನಾಂಕ : ಜುಲೈ ೧ ರಿಂದ ೦೫, ೨೦೧೯ (೫ ದಿನಗಳು)
ಸಂಚಾಲಕರು : ಡಾ.ರಾಧಾಮಣಿ.ಎಂ.ಎ., ಅಸೋಸಿಯೇಟ್ ಫೆಲೋ
|
|
ಶಿಬಿರ ೭ : ಮಂಡ್ಯ
ಸ್ಥಳ : ಪಿ.ಇ.ಎಸ್ ಕಾಲೇಜು, ಮಂಡ್ಯ
ದಿನಾಂಕ : ಜನವರಿ ೧೦ ರಿಂದ ೧೪, ೨೦೧೮
ಸಹಯೋಗ : ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ
ಸಂಚಾಲಕರು : ಡಾ. ಮಾಲಿನಿ ಎನ್. ಅಭ್ಯಂಕರ್, ಅಸೋಸಿಯೇಟ್ ಫೆಲೋ
|
|
ಶಾಸ್ತಿçÃಯ ಕನ್ನಡ ಅಧ್ಯಯನದ ಹೊಸ ಸಾಧ್ಯತೆಗಳು
ಸ್ಥಳ : ಭಾರತೀಯ ಭಾಷಾ ಸಂಸ್ಥಾನ, ಮೈಸೂರು
ದಿನಾಂಕ : ನವೆಂಬರ್ ೧೭ ರಿಂದ ೨೧, ೨೦೧೭ (೫ ದಿನಗಳು)
ಸಂಚಾಲಕರು : ಡಾ. ಚಲಪತಿ ಆರ್, ಸೀನಿಯರ್ ಫೆಲೋ
|
|
|
|