ಸಾಹಿತ್ಯ
ಹರಿಶ್ಚಂದ್ರ ಕಾವ್ಯಂ
    1. ಹರಿಶ್ಚಂದ್ರಕಾವ್ಯಂ
    2. ರಾಘವಾಂಕ
    3. ಕ್ರಿ.ಶ. 1225
    4. ಬಳ್ಳಾರಿ ಜಿಲ್ಲೆಯ ಹಂಪಿ
    5. ವೀರಶೈವ
    6. ಹಂಪಿಯ ದೇವರಾಜ, ವಾರಂಗಲ್ಲಿನ ಪ್ರತಾಪರುದ್ರದೇವನ ಆಸ್ಥಾನಕ್ಕೆ ಭೇಟಿ ನೀಡಿದ್ದನು.
    7. ಉಭಯಕವಿಕಮಲರವಿ
    8. ಷಟ್ಪದಿ ಕಾವ್ಯ
    9. ವಾರ್ಧಕ ಷಟ್ಪದಿ(ಅಪರೂಪವಾಗಿ ರಗಳೆಯ ಬಳಕೆ)
    10. ಓಲೆಗರಿ ಮತ್ತು ಕಾಗದ
    11. ಕ್ರಿ.ಶ. 1898
    12. ರಾಮಾನುಜ ಅಯ್ಯಂಗಾರ್ ಎಂ.ಎ.
    13. ಕರ್ನಾಟಕ ಕಾವ್ಯಕಲಾನಿಧಿ ಮಾಲೆ, ಮೈಸೂರು.

     

    1. ನಂತರದ ಆವೃತ್ತಿಗಳು:

    ಅ. ಹರಿಶ್ಚಂದ್ರ ಕಾವ್ಯ ಸಂಗ್ರಹ, ಸಂ. ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್. ಕೃಷ್ಣಶಾಸ್ತ್ರೀ, 1931, ಮೈಸೂರು ವಿಶ್ವವಿದ್ಯಾಲಯ, ಮೈಸೂರು

    ಆ. ಹರಿಶ್ಚಂದ್ರಕಾವ್ಯ, ಸಂ. ಎನ್. ಬಸವಾರಾಧ್ಯ ಮತ್ತು ಪಂಡಿತ್ ಬಸಪ್ಪ, 1955, ಮೈಸೂರು.

    ಇ. ಹರಿಶ್ಚಂದ್ರಕಾವ್ಯಂ, ಸಂ. ವೈ. ನಾಗೇಶಶಾಸ್ತ್ರೀ ಮತ್ತು ಎಂ.ಜಿ. ವೆಂಕಟೇಶಯ್ಯ, 1957, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

    ಈ. ರಾಘವಾಂಕನ ಸಮಗ್ರ ಕೃತಿಗಳು, ಸಂ. ಎಂ.ಎಂ. ಕಲಬುರ್ಗಿ, 1999, ಕನ್ನಡ ವಿಶ್ವವಿದ್ಯಾಲಯ, ಹಂಪಿ.

     

    1. ರಾಘವಂಕನ ಹರಿಶ್ಚಂದ್ರ ಕಾವ್ಯವು ಕನ್ನಡದ ಅತ್ಯಂತ ಜನಪ್ರಿಯವಾದ ಕೃತಿಗಳಲ್ಲಿ ಒಂದು. ಅದು ಸಮಗ್ರ ಕರ್ನಾಟಕದಲ್ಲಿ, ಶತಮಾನಗಳಿಂದ ಕನ್ನಡ ಮನಸ್ಸಿನ ಭಾಗವಾಗಿ ಉಳಿದಿಕೊಂಡಿದೆ. ಈ ಕಾವ್ಯವು ಗಮಕ ಪರಂಪರೆಯ ನೆರವಿನಿಂದ ಅನಕ್ಷರಸ್ಥ ಸಮುದಾಯಗಳನ್ನೂ ಯಶಸ್ವಿಯಾಗಿ ತಲುಪಿದೆ. ಈ ಪರಂಪರೆಯು ಗಮಕಿ ಮತ್ತು ವ್ಯಾಖ್ಯಾನಕಾರರ ಸಂಯೋಜನೆಯ ಫಲವಾಗಿ ಗೆಲ್ಲುತ್ತದೆ. ಅನಂತರದ ದಿನಗಳಲ್ಲಿ ಪ್ರೊಫೆಶನಲ್ ರಂಗಭೂಮಿ ಮತ್ತು ಚಲನಚಿತ್ರಗಳು ಹರಿಶ್ಚಂದ್ರನ ಕಥೆಗೆ ಹೊಸ ಆಯಾಮಗಳನ್ನು ಸೇರಿಸಿವೆ.ಹರಿಶ್ಚಂದ್ರನ ಕಥೆಯು ಮೂಲತಃ ವೇದಕಾಲೀನವಾಗಿದ್ದು ಅನೇಕ ಪುರಾಣಗಳಲ್ಲಿ. ಅದರ ಉಲ್ಲೇಖವಿದೆ. ಮೂಲಕಥೆಯ ಅನೇಕ ಪ್ರಾದೇಶಿಕವಾದ ಬದಲಾವಣೆಗಳನ್ನು ಹೊಂದಿದೆ. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದಲ್ಲಿಯೂ ಆ ಕಥೆಯ ಮುಂದುವರಿಕೆಯನ್ನು ಕಾಣಬಹುದು. ಪು.ತಿ.ನ., ಎಸ್.ವಿ. ರಂಗಣ್ಣ ಮುಂತಾದವರು ಹರಿಶ್ವಂದ್ರನನ್ನು ಕುರಿತ ನಾಟಕಗಳನ್ನು ಬರೆದಿದ್ದಾರೆ.

    ಹರಿಶ್ಚಂದ್ರನು ಕಾವ್ಯದ ಮೊದಲಿನಂದಲೇ ಒಂದು ಬಿಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ಸತ್ಯ ಮತ್ತು ಕುಲನಿಷ್ಠೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಅವನ ಕೋಪಿಷ್ಟನೂ ಹಟಮಾರಿಯೂ ಆದ ಎದುರಾಳಿ ವಿಶ್ವಾಮಿತ್ರನು ಅವನಿಗೆ ಕೊಡಬಾರದ ಕಷ್ಟಗಳನ್ನು ಕೊಡುತ್ತಾನೆ. ಸತ್ಯದ ವೇದಿಕೆಯಲ್ಲಿ ತನ್ನ ಕುಟುಂಬ ಹಾಗೂ ಪ್ರಜೆಗಳ ಇಷ್ಟವನ್ನು ಬಲಿಕೊಡಲು ಸಿದ್ಧನಾಗಿರುವ ಹರಿಶ್ಚಂದ್ರನ ದೃಢ ಮನಸ್ಸು ವಿಷಾದವನ್ನು ಹುಟ್ಟಿಸುತ್ತದೆ. ಓದುಗರು ಸ್ವತಃ ಹರಿಶ್ಚಂದ್ರನ ದುಃಖಕ್ಕಿಂತ ಹೆಚ್ಚಾಗಿ ಅವನ ಹೆಂಡತಿ ಮಕ್ಕಳಾದ ಚಂದ್ರಮತಿ ಮತ್ತು ರೋಹಿತಾಶ್ವರ ಪಡಿಪಾಟಲಿಗಾಗಿ ಮರುಗುತ್ತಾರೆ. ವಿಶ್ವಾಮಿತ್ರನ ಮಕ್ಕಳಾದ ಹೊಲತಿಯರೊಂದಿಗೆ ಹರಿಶ್ಚಂದ್ರನು ನಡೆಸುವ ಕೂದಲು ಸೀಳುವ ವಾದವಿವಾದಗಳು ಅವನ ಬಗ್ಗೆ ಅಂತಹ ಅನುಕಂಪವನ್ನು ಹುಟ್ಟಿಸುವುದಿಲ್ಲ. ಸ್ವತಃ ಕವಿ ರಾಘವಾಂಕನು ವಿಶ್ವಾಮಿತ್ರನ ಪರವಾಗಿಯೇ ಇರುವನೆಂಬ ಸಂಗತಿಯು ನಮಗೆ ಗೊತ್ತಿದ್ದರೂ ಓದುಗನ ಸಹಾನುಭೂತಿಯು ಹೊಲತಿಯರ ಕಡೆಯೇ ಇರುತ್ತದೆ.

    ಈ ಕಾವ್ಯದ ಸಾಮಾಜಿಕ-ರಾಜಕೀಯ ಆಯಾಮಗಳನ್ನು ಬದಿಗಿಟ್ಟು ನೋಡಿದಾಗ, ಇದರ ನಿರೂಪಣ ವಿಧಾನ ಮತ್ತು ನಾಟಕೀಯತೆಗಳು ಅತ್ಯುತ್ತಮ ಮಟ್ಟದವೆಂದು ಗೊತ್ತಾಗುತ್ತದೆ. ರಾಘವಾಂಕನು ತನ್ನ ಈ ಕೃತಿಯಲ್ಲಿ ಸಂಸ್ಕೃತ ಮತ್ತು ನಡುಗನ್ನಡಗಳ ಬಹಳ ಪರಿಣಾಮಕಾರಿಯಾದ ಸಂಯೋಜನೆಯನ್ನು ಸಾಧಿಸಿದ್ದಾನೆ. ಹರಿಶ್ಚಂದ್ರ, ಚಂದ್ರಮತಿ, ವಿಶ್ವಾಮಿತ್ರ, ನಕ್ಷತ್ರಕ, ವೀರಬಾಹುಕ ಮುಂತಾದ ಪಾತ್ರಗಳು ಕರ್ನಾಟಕದಲ್ಲಿ ಮನೆಮಾತಾಗಿವೆ. ವಿಶ್ವಾಮಿತ್ರ ಮತ್ತು ವಶಿಷ್ಟರ ಸಂಘರ್ಷ, ಹರಿಶ್ಚಂದ್ರ-ಹೊಲತಿಯರ ಸಂವಾದ, ಹರಿಶ್ಚಂದ್ರನ ರಾಜ್ಯತ್ಯಾಗ, ರೋಹಿತಾಶ್ವನ ಸಾವು, ಚಂದ್ರಮತಿಯ ಪ್ರಲಾಪ ಮುಂತಾದ ಪ್ರಸಂಗಗಳು ಕನ್ನಡ ಸಂಸ್ಕೃತಿಯಲ್ಲಿ ಎಂಟು ಶತಮಾನಗಳಿಂದ ಅಚ್ಚಳಿಯದೆ ಉಳಿದಿವೆ.

     

    1. ಮುಂದಿನ ಓದು:

    ಅ. ಹರಿಶ್ಚಂದ್ರ ಕಾವ್ಯ-ಸಾಸ್ಕೃತಿಕ ಮುಖಾಮುಖಿ, ಸಂ. ಶಿವಾನಂದ ವಿರಕ್ತಮಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

    ಆ. ಸತ್ಯಸಾಧಕ ಹರಿಶ್ಚಂದ್ರ, ಜಿ.ಎಸ್. ಶಿವರುದ್ರಪ್ಪ, ಪರಿಶೀಲನೆ, ಮೈಸೂರು

    ಇ. ಮಹಾಕವಿ ರಾಘವಾಂಕ, ಆರ್.ಸಿ. ಹಿರೇಮಠ, 1966, ಶಾರದಾಮಂದಿರ, ಮೈಸೂರು.

ಮುಖಪುಟ / ಸಾಹಿತ್ಯ