ಪಾರಂಪರಿಕ ತಿಳಿವಳಿಕೆಯ ಆಕರಗಳು
ಸೂಪಶಾಸ್ತ್ರ
  1. ಪುಸ್ತಕದ ಹೆಸರು : ಸೂಪಶಾಸ್ತ್ರ
  2. ಲೇಖಕನ ಹೆಸರು : ಮಂಗರಸ-3, ಅವನು ಮೈಸೂರು ಜಿಲ್ಲೆಯ, ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ರಾಜನಾಗಿದ್ದನು.
  3. ಕಾಲ : ಸುಮಾರು ಕ್ರಿ.ಶ. 1508, ಹದಿನಾರನೆಯ ಶತಮಾನ
  4. ವಸ್ತು : ಪಾಕಶಾಸ್ತ್ರ
  5. ಕಿರು ಪರಿಚಯ: ಮಂಗರಸನ ಸೂಪಶಾಸ್ತ್ರವು ಅಡಿಗೆ ಮಾಡುವ ಕಲೆ/ವಿಜ್ಞಾನವನ್ನು ಕುರಿತು ಕನ್ನಡದಲ್ಲಿ ಬಂದಿರುವ ಮೊದಮೊದಲ ಪುಸ್ತಕಗಳಲ್ಲಿ ಒಂದು. ಇದನ್ನು ವಾರ್ಧಕ ಷಟ್ಪದಿಯಲ್ಲಿ ಬರೆಯಲಾಗಿದೆ. ಇದರಲ್ಲಿ 650 ಪದ್ಯಗಳನ್ನು ಒಳಗೊಂಡಿರುವ ಆರು ಅಧ್ಯಾಯಗಳಿವೆ. ಮೇಲುನೋಟಕ್ಕೆ ತೋರುವಂತೆ ಇದು ಸಂಸ್ಕೃತ ಪುಸ್ತಕವೊಂದರ ಅನುವಾದ. ಈ ಅಧ್ಯಾಯಗಳಲ್ಲಿ ತಿಂಡಿಗಳು, ಪಾನೀಯಗಳು, ಅಕ್ಕಿಯಿಂದ ತಯಾರಿಸುವ ಪದಾರ್ಥಗಳು, ಪಲ್ಯಗಳು ಮತ್ತು ಕಳಲೆಯಿಂದ (ಎಳೆ ಬಿದಿರು) ತಯಾರಿಸುವ ಪದಾರ್ಥಗಳ ತಯಾರಿಕೆಯ ವಿಧಾನಗಳನ್ನು ಹೇಳಲಾಗಿದೆ. ಈ ಭಕ್ಷ್ಯ ಭೋಜ್ಯಗಳನ್ನು ತಯಾರಿಸಲು ಬೇಕಾಗುವ ವಸ್ತುಗಳು, ಪಾತ್ರೆಗಳು, ಒಲೆಗಳು ಮತ್ತು ತಯಾರಿಕೆಯ ವಿಧಾನಗಳನ್ನು ಬಹಳ ವಿವರವಾಗಿ ತಿಳಿಸಿದ್ದಾನೆ. ಅವನು ಪ್ರಾದೇಶಿಕವಾದ ತರಕಾರಿಗಳನ್ನು ಹೆಸರಿಸುವಂತೆಯೇ ಎಲ್ಲ ಕಡೆಯೂ ಸಿಗುವ ತರಕಾರಿಗಳನ್ನೂ ಪ್ರಸ್ತಾಪಿಸುತ್ತಾನೆ. ಪುರಿವಿಳಂಗಾಯಿ, ‘ಸವಡು ರೊಟ್ಟಿ, ‘ಹಿಮಾಂಬುಪಾನ, ‘ಅಮೃತವಲ್ಲರಿ, ಮತ್ತು ಗುಜ್ಜರವೇಣಿ ಗಳು ಮಂಗರಸನು ವರ್ಣಿಸಿರುವ ವಿಶಿಷ್ಟವಾದ ಖಾದ್ಯಗಳಲ್ಲಿ ಕೆಲವು.
  6. ಪ್ರಕಟಣೆಯ ಇತಿಹಾಸ : 1969, ಮಂಗರಸನ ಸೂಪಶಾಸ್ತ್ರ, ಸಂಪಾದಕರು: ಎಸ್.ಎನ್. ಕೃಷ್ಣ ಜೋಯಿಸ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
  7.  

  8. ಮುಂದಿನ ಓದು:

ಅ. ಕೃಷ್ಣಜೋಯಿಸರು ಈ ಕೃತಿಗೆ ಬರೆದಿರುವ ಮುನ್ನುಡಿ

ಆ. Kamat's Potpourri: Amma's Column ಈ ಪುಸ್ತಕವನ್ನು ಆರು ಓಲೆಗರಿಯ ಹಸ್ತಪ್ರತಿಗಳು ಮತ್ತು ಒಂದು ಕಾಗದದ ಹಸ್ತಪ್ರತಿಯನ್ನು ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ.

ಸಂಪಾದಕರು ಮೂಲ ಸಂಸ್ಕೃತ ಪಠ್ಯಗಳು ಮತ್ತು ಕನ್ನಡ ಸಾಹಿತ್ಯಕೃತಿಗಳಿಂದ ಉಪಯುಕ್ತವಾದ ಮಾಹಿತಿಗಳನ್ನು ತೆಗೆದುಕೊಟ್ಟಿದ್ದಾರೆ.

 

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು