ಪಾರಂಪರಿಕ ತಿಳಿವಳಿಕೆಯ ಆಕರಗಳು
ಕರ್ನಾಟಕ ಭಾಷಾಭೂಷಣ
  1. ಪುಸ್ತಕದ ಹೆಸರು: ಕರ್ನಾಟಕ ಭಾಷಾಭೂಷಣ
  2. ಲೇಖಕನ ಹೆಸರು: ನಾಗವರ್ಮ-2
  3. ಕಾಲ: ಕ್ರಿ.ಶ. 1145, (ಹನ್ನೆರಡನೆಯ ಶತಮಾನ)
  4. ವಸ್ತು: ವ್ಯಾಕರಣ
  5. ಪರಿಚಯ: ಕವಿರಾಜಮಾರ್ಗದಲ್ಲಿ ಬರುವ ಪ್ರಾಸಂಗಿಕ ಉಲ್ಲೇಖಗಳನ್ನು ಹೊರತಪಡಿಸಿದರೆ, ಕರ್ನಾಟಕ ಭಾಷಾಭೂಷಣವೇ, ನಮಗೆ ಸಿಕ್ಕಿರುವ ಮೊಟ್ಟಮೊದಲ, ಕನ್ನಡ ಭಾಷೆಯ ವ್ಯಾಕರಣ. ಇದು ಸಂಸ್ಕೃತಭಾಷೆಯಲ್ಲಿದೆ. ಇದರಲ್ಲಿ, 269 ಸೂತ್ರಗಳನ್ನು ಒಳಗೊಂಡಿರುವ ಹತ್ತು ಅಧ್ಯಾಯಗಳಿವೆ. ಸಂಜ್ಞಾ, ಸಂಧಿ, ವಿಭಕ್ತಿ, ಕಾರಕ , ಶಬ್ದರೀತಿ, ಸಮಾಸ, ತದ್ಧಿತ, ಆಖ್ಯಾತ, ಅವ್ಯಯ ಮತ್ತು ನಿಪಾತ ಎನ್ನುವುದು ಅವುಗಳ ಶೀರ್ಷಿಕೆಗಳು. ಈ ಪುಸ್ತಕವು ಕನ್ನಡ ಭಾಷೆಯ ಧ್ವನಿರಚನೆ ಮತ್ತು ಶಬ್ದರಚನೆಗಳನ್ನು ಕುರಿತ ಹಾಗೆ ಸಾಕಷ್ಟು ಸಮರ್ಪಕವಾದ ಮಾಹಿತಿಯನ್ನು ಕೊಡುತ್ತದೆ. ಪ್ರತಿಯೊಂದು ಸೂತ್ರಕ್ಕೂ ದೀರ್ಘವಾದ ವಿವರಣಾತ್ಮಕ ಟಿಪ್ಪಣಿಗಳನ್ನು ಕೊಡಲಾಗಿದೆ. ಸೂಕ್ತವಾದ ನಿದರ್ಶನಗಳನ್ನು ಕನ್ನಡದ ಸಾಹಿತ್ಯಕ ಪಠ್ಯಗಳಿಂದ ತೆಗೆದು ಕೊಡಲಾಗಿದೆ. ಸಹಜವಾಗಿಯೇ ಅಲ್ಲಿ ದೊರಕುವ ಮಾಹಿತಿಯು, ಕವಿರಾಜಮಾರ್ಗಪೂರ್ವದ ಕನ್ನಡ ಕಾವ್ಯಗಳ ಬಗ್ಗೆ, ಅಮೂಲ್ಯವಾದ ಹೊಳಹುಗಳನ್ನು ನೀಡುತ್ತವೆ. ನಾಗವರ್ಮನ ವ್ಯಾಕರಣವು ಸಂಸ್ಕೃತದ ಶರ್ವವರ್ಮನ ಕಾತಂತ್ರ ವ್ಯಾಕರಣದ ತಾತ್ವಿಕತೆಯಿಂದ ಪ್ರಭಾವಿತವಾಗಿದೆ. ಆದ್ದರಿಂದಲೇ ಕನ್ನಡ ಭಾಷೆಯ ಅಂದಿನ ವಾಸ್ತವಗಳು ಮತ್ತು ಅದರ ದ್ರಾವಿಡ ಸಂಬಂಧಗಳು ಸರಿಯಾಗಿ ಪ್ರತಿಫಲಿತವಾಗಿಲ್ಲ.
  6.  

  7. ಪ್ರಕಟಣೆಯ ಇತಿಹಾಸ:

ಅ. 1880, ಸಂ. ಸಿದ್ಧಾಂತಿ ಪುಸ್ತಕಂ ಅಳಸಿಂಗರಾಚಾರ್ಯ, ಜಗನ್ಮೋಹನ ಮುದ್ರಾಕ್ಷರಶಾಲಾ, ಮೈಸೂರು.

ಆ. 1884, ಕರ್ನಾಟಕ ಭಾಷಾಭೂಷಣ, ಸಂ. ಬಿ.ಎಲ್. ರಾಯಿಸ್, ಮೈಸೂರು ಗೌರ್ನಮೆಂಟ್ ಪ್ರಿಂಟಿಂಗ್ ಪ್ರೆಸ್, ಮೈಸೂರು. ಈ ಆವೃತ್ತಿಯನ್ನು, ಜೈನ ವೃತ್ತಿಗಳನ್ನು(ವೃತ್ತಿ=ವಿವರಣೆ) ಹೊಂದಿರುವ ಮೂರು ಓಲೆಗರಿ ಹಸ್ತಪ್ರತಿಗಳಿಂದ ಸಿದ್ಧಪಡಿಸಲಾಗಿದೆ.

ಇ. 1903, ಸಂ. ಆರ್. ನರಸಿಂಹಾಚಾರ್, (ಪ್ರಾಚೀನ, ಕನ್ನಡ ಟೀಕೆಯೊಂದಿಗೆ)

ಈ. 1975, ಮರುಮುದ್ರಣ, ಶಾರದಾಮಂದಿರ, ಮೈಸೂರು.

 

  1. ಮುಂದಿನ ಓದು ಮತ್ತು ಲಿಂಕುಗಳು:

ಅ. ಪ್ರಾಚೀನ ಕನ್ನಡ ವ್ಯಾಕರಣಗಳು, ಎಂ.ವಿ.ಸೀತಾರಾಮಯ್ಯ, 1979, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಆ. ಕನ್ನಡ ವ್ಯಾಕರಣ ಪರಂಪರೆ, ಡಿ.ಎನ್. ಶಂಕರಭಟ್, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಇ. ಕರ್ನಾಟಕ ಭಾಷಾಭೂಷಣ, ಎಸ್.ಎಸ್. ಅಂಗಡಿ, 2007, ವಿದ್ಯಾನಿಧಿ ಪ್ರಕಾಶನ, ಗದಗ

ಈ. ‘Debates on the Grammatical Theories in Dravidian’, Ed. V.I. Subramonian

ಉ. ‘History of Gramatical Theories in Kannada’, J.S. Kulli

ಊ. ‘Katantra Vyakarana and its Signnificance’, Visalakshi, International Journal of Draidian Linguistics, Vol.32, No.1

  1. ಅನುವಾದ:

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು