ಪಾರಂಪರಿಕ ತಿಳಿವಳಿಕೆಯ ಆಕರಗಳು
ಗೋವೈದ್ಯ
  1. ಪುಸ್ತಕದ ಹೆಸರು : ಗೋವೈದ್ಯ
  2. ಲೇಖಕನ ಹೆಸರು: ಕೀರ್ತಿವರ್ಮ
  3. ಕಾಲ: ಸುಮಾರು ಕ್ರಿ.ಶ. 1125, ಅವನು ಚಾಳುಕ್ಯ ಚಕ್ರವರ್ತಿಯಾದ ಆರನೆಯ ವಿಕ್ರಮಾದಿತ್ಯನ ಆಶ್ರಯದಲ್ಲಿದ್ದನು.
  4. ವಸ್ತು : ಪಶುವೈದ್ಯ ಮತ್ತು ಪಶುಸಂಗೋಪನ ಶಾಸ್ತ್ರ
  1. ಕಿರು ಪರಿಚಯ: ಇದು ಪಶುವೈದ್ಯ ಮತ್ತು ಪಶುಪಾಲನೆಗೆ ಸಂಬಂಧಿಸಿದಂತೆ ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲನೆಯ ಪುಸ್ತಕವೆಂದು ತೋರುತ್ತದೆ. ಇದರ ಲೇಖಕನಾದಕೀರ್ತಿವರ್ಮನು, ಚಕ್ರವರ್ತಿ ವಿಕ್ರಮಾದಿತ್ಯನ ಸಹೋದರನಿರಬಹುದೆಂದು ಊಹಿಸಲಾಗಿದೆ. ಇದರಲ್ಲಿ ಹಸುಗಳಿಗೆ ಬರಬಹುದಾದ ಬಗೆಬಗೆಯ ರೋಗಗಳು ಮತ್ತು ಅವುಗಳಿಗೆ ಮಾಡಬೇಕಾದ ಚಿಕಿತ್ಸೆಯನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅದರ ಜೊತೆಗೆ ಕೀರ್ತಿವರ್ಮನು ಪ್ರಾಣಿಗಳಲ್ಲಿ ದಯೆ ಇಡಬೇಕೆಂಬ ಸಂದೇಶವನ್ನೂ ಕೊಟ್ಟಿದ್ದಾನೆ.
  1. ಪ್ರಕಟಣೆಯ ಇತಿಹಾಸ: ಈ ಪುಸ್ತಕವು ಇದುವರೆಗೆ ಪ್ರಕಟವಾಗಿಲ್ಲ. ಅದರ ಒಂದೇ ಒಂದು ತಾಳೆಗರಿಯ ಹಸ್ತಪ್ರತಿಯು ಮೈಸೂರು ವಿಶ್ವವಿದ್ಯಾಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಗ್ರಹದಲ್ಲಿದೆ. ಅದು ಕೂಡ ತಪ್ಪುಗಳಿಂದ ತುಂಬಿಹೋಗಿದೆ.
  2. ಮುಂದಿನ ಓದು : ಇಲ್ಲ
  3. ಅನುವಾದ : ಇಲ್ಲ

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು