ಸುದ್ದಿ
ಸುದ್ದಿ-1

ಸಿಐಐಎಲ್‌: ಡಾ.ಖಂಡೋಬಾ ನೂತನ ನಿರ್ದೇಶಕ: 20.ಜನವರಿ.2016: ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (ಸಿಐಐಎಲ್‌)ಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ (ಸಿಇಎಸ್‌ಸಿಕೆ)ದ ನೂತನ ಯೋಜನಾ ನಿರ್ದೇಶಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಪಿ.ಕೆ. ಖಂಡೋಬಾ ನೇಮಕಗೊಂಡಿದ್ದಾರೆ.

ಸುದ್ದಿ-2

ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರವರು ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ೨೦೧೧ರ ಡಿಸೆಂಬರ್ ೧೭ರಂದು ಮೈಸೂರಿನಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಈ ಕೇಂದ್ರವು ಭಾಷೆಯ ಅಧ್ಯಯನದ ಜೊತೆಗೆ ನಾಡಿನ ಸಂಗೀತ, ಸಾಹಿತ್ಯ, ಸಂಸ್ಕೃತಿ, ಜ್ಞಾನಶಾಲೆಯ ಮೇಲೆ ಬೆಳಕು ಚೆಲ್ಲಬೇಕು, ರಾಜ್ಯ ಸರ್ಕಾರವು ಅಧ್ಯಯನ ಕೇಂದ್ರದ ಸ್ವಾಯತ್ತತ್ತೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದು" ಎಂದರು. ಕನ್ನಡದ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಡಿದ ಪ್ರಮುಖರಲ್ಲಿ ಒಬ್ಬರಾದ ಸಂಶೋಧಕ ಪ್ರೊ. ಎಂ. ಚಿದಾನಂದಮೂರ್ತಿ ಕಾರ್ಯಕ್ರಮದ ಆಶಯ ಭಾಷಣ ಮಾಡಿದರು. ಕಾರ್ಪೋರೇಟ್ ವ್ಯವಹಾರಗಳ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ, ಅಧ್ಯಯನ ಕೇಂದ್ರದ ಮುಖ್ಯಸ್ಥ ಆರ್. ಸುಬ್ಬಕೃಷ್ಣ, ಮತ್ತು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಎಸ್. ಎನ್. ಬರ್ಮನ್ ಉಪಸ್ಥಿತರಿದ್ದರು.

ಸುದ್ದಿ-3

ಡಾ.ಭ.ಮಲ್ಲಿಕಾರ್ಜುನ, ರೀಡರ್ ಮತ್ತು ಸಂಶೋಧನಾಧಿಕಾರಿ ಅವರನ್ನು ಶಾಸ್ತ್ರೀಯ ಕನ್ನಡ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ತನ್ನ ಕಛೇರಿ ಆದೇಶ ಸಂಖ್ಯೆ ಎಫ್.1/11-22/2010-11/ಇಎಸ್‌ಟಿಟಿ ದಿನಾಂಕ ನವಂಬರ್ 8, 2010ದಲ್ಲಿ ತಿಳಿಸಿದೆ. ಈ ಆದೇಶ ನವಂಬರ್ 8, 2010 ರಿಂದ ಜಾರಿಗೆ ಬಂದಿರುತ್ತದೆ.

ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ೨೦೧೧ರ ಡಿಸೆಂಬರ್ ೧೭ರಂದು ಉದ್ಘಾಟಿಸಲಾಯಿತು.

 

 

 
 

ಮುಖಪುಟ     ಪುಟದ ಮೊದಲಿಗೆ
  Central Institute of Indian Languages
Department of Higher Education,Language Bureau
Ministry of Human Resource Development
Government of India
Manasagangothri, Hunsur Road, Mysore 570006
Tel: (0821) 2515820 (Director)
Reception/PABX : (0821) 2345000
Fax: (0821) 2515032 (Off)
 
Copyright © 2011. Central Institute of Indian Languages. All rights reserved worldwide.